ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಸ್ಪರ್ಧೆ: ಆಳ್ವಾಸ್ ಧೀಂಕಿಟ ಕೇಂದ್ರ ಪ್ರಥಮ ಒಂದು ಲಕ್ಷ ಬಹುಮಾನ ಪಡೆದ ತಂಡ

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಇದರ ದಶಮ ಸಂಭ್ರಮದ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡ್ನಲ್ಲಿ 15 ವರ್ಷದಿಂದ 25 ವರ್ಷದೊಳಗಿನ ಯುವ ಪ್ರತಿಭೆಗಳಿಗಾಗಿ ಏರ್ಪಡಿಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡವು ಪ್ರಥಮ ಬಹುಮಾನವನ್ನು ಪಡೆಯಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿಸಿದ, ಶೇಖರ ಶೆಟ್ಟಿಗಾರ್ ಮತ್ತು ಆದಿತ್ಯ ಅಂಬಲಪಾಡಿ ನಿರ್ದೇಶನದಲ್ಲಿ ‘ಸತಿ ಉಲೂಪಿ’ ಪ್ರಸಂಗ ಪ್ರದರ್ಶನವನ್ನು ನೀಡಿ, ಒಂದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಪ್ರಥಮ ಬಹುಮಾನವನ್ನು ಆಳ್ವಾಸ್ ಧೀಂಕಿಟ […]