ಉಡುಪಿ: ಅಕ್ರಮ ಮದ್ಯ ದಾಸ್ತಾನು ಅಡ್ಡೆಯ ಮೇಲೆ ದಾಳಿ : 64.800 ಲೀ ಮದ್ಯ ವಶ, ಓರ್ವ ಆರೋಪಿಯ ಬಂಧನ

ಉಡುಪಿ: ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂತಾಲಕಟ್ಟೆ ಎಂಬಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 64.800 ಲೀ ಮದ್ಯವನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಶಿಲಾವನ ಜೋಗಿ ಬೆಟ್ಟುವಿನ ಮಂಜುನಾಥ ಕುಂದರ್ ಬಂಧಿತ ಆರೋಪಿ.‌ ಉಡುಪಿ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೆಸ್ ಅವರ ನಿರ್ದೇಶನದ ಮೇರೆಗೆ ಉಡುಪಿ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ […]