ಉಡುಪಿ: ಜಿಲ್ಲೆಯಲ್ಲಿ ಅಕ್ಕ ಸಂಜೀವಿನಿ ಅಂಗಡಿ ಪ್ರಾರಂಭ

ಉಡುಪಿ: ಜಿಲ್ಲೆಯ ಸಂಜೀವಿನಿ ಯೋಜನೆ ವಿನೂತನ ಕಾರ್ಯಕ್ರಮಗಳಿಂದ ಪರಿಚಿತವಾಗಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮಗಳು, ಚಟುವಟಿಕೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ. ವಿವಿಧ ನವೀನ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವುದರೊಂದಿಗೆ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಅವರು ಉದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಜೀವಿನಿ ಮಾರಾಟ ಮಳಿಗೆಯನ್ನು ಸಂಜೀವಿನಿ ಮಹಿಳೆಯರಿಂದ ಸ್ಥಾಪಿಸಿ ಅದನ್ನು ನಿರ್ವಹಣೆ ಮಾಡಿ ಈ ಮಹಿಳೆಯರು ಉದ್ಯಮಿಗಳಾಗುವುದರ ಜೊತೆಗೆ ಇತರ ಮಹಿಳಾ […]