ಉಡುಪಿ: ಎಸಿ ಕೋಣೆಯಿಂದ ದಕ್ಷ ಎಸ್ಪಿ ಹೊರಬರಲಿ: ಶ್ರೀನಿಧಿ ಹೆಗ್ಡೆ

ಉಡುಪಿ: ರಾಜ್ಯದಲ್ಲೆ ಹೆಚ್ಚು ಶಾಂತಿಯುತ, ಕಾನೂನು ಸುವ್ಯವಸ್ಥೆಯನ್ನು ಪಾಲಿಸುವ ನಾಗರಿಕರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ, ಪ್ರಸ್ತುತ ಎಸ್ಪಿಯಾಗಿರುವ ಡಾ.ಅರುಣ್ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಆದರೆ ಅವರ ನಿರ್ಧಾರಗಳು ಪೋಲಿಸ್ ಸಿಬ್ಬಂದಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್, ಹೈಕೋರ್ಟ್ ವಕೀಲ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದಿಸಿದ್ದಾರೆ. ಆರಂಭದಲ್ಲಿ ಸಾಕಷ್ಟು ಖ್ಯಾತಿ ಪಡೆದ ಎಸ್ಪಿ ಡಾ.ಅರುಣ್ ಅವರ ಅವಧಿಯಲ್ಲಿ ನಡೆದ ಘನಘೋರ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ಅವರ ನೇತೃತ್ವದಲ್ಲಿ ಜಿಲ್ಲಾ […]