ಉಡುಪಿ: ಏರ್ ಪೋರ್ಟ್‌ನಲ್ಲಿ ಉದ್ಯೋಗದ ಜಿ-ಮೇಲ್ ಸಂದೇಶ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ.!

ಉಡುಪಿ: ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕಳುಹಿಸಿದ ಜಿ-ಮೇಲ್ ಸಂದೇಶವನ್ನು ನಂಬಿ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೈಕಾಣ ಎಂಬಲ್ಲಿ ನಡೆದಿದೆ. ವಂಡ್ಸೆ ಗ್ರಾಮದ ಕೈಕಾಣ ನಿವಾಸಿ ಅನುಷಾ (21) ವಂಚನೆಗೊಳಗಾದ ಯುವತಿ. ಇವರಿಗೆ 2021 ನೇ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ  ಜಿ-ಮೇಲ್ ಸಂದೇಶವೊಂದು ಬಂದಿತ್ತು. ಅದರಲಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದು, ಆಗ ಪರಿಚಿತ ವ್ಯಕ್ತಿ ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರೇ […]