ಉಡುಪಿ: ಪೊಲೀಸರೆಂದು ನಂಬಿಸಿ ಮಹಿಳೆಯ ಚಿನ್ನದ ಸರ, ಬಳೆ ಲಪಟಾಯಿಸಿದ ವಂಚಕರು

ಉಡುಪಿ: ಪೊಲೀಸರೆಂದು ಹೇಳಿ ಮನೆ ಕೆಲಸ ಮುಗಿಸಿಕೊಂಡು ತೆರಳುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ₹40 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆಗಳನ್ನು ಲಪಟಾಯಿಸಿದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ನಡೆದಿದೆ. ಅಂಬಲಪಾಡಿ ನಿವಾಸಿ ವಸಂತಿ ಎಂಬಾಕೆ ವಂಚನೆಗೊಳಗಾದ ಮಹಿಳೆ. ಇವರು ಭಾನುವಾರ ಪ್ಲಾಟ್‌ವೊಂದರಲ್ಲಿ ಮನೆ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಇಬ್ಬರು ಅಪರಿಚಿತರು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದು, ವಸಂತಿಯವರನ್ನು ತಡೆದು […]