ಉಡುಪಿ: ಹುಲಿವೇಷ ಕುಣಿತಕ್ಕೆ ಆಗುತ್ತಿರುವ ಅಪಪ್ರಚಾರ ಖಂಡಿಸಿ ಬೃಹತ್ ಪಾದಯಾತ್ರೆ

ಉಡುಪಿ: ಉಡುಪಿ ಶೈಲಿಯ ಹುಲಿವೇಷ ಕುಣಿತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಹಾಗೂ ಸಾಂಪ್ರದಾಯಿಕ ಉಡುಪಿ ಶೈಲಿಯ ಹುಲಿ ಕುಣಿತವನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿಯ ಸಮಾನಮನಸ್ಕ ತಂಡಗಳ ಸಂಯೋಜನೆಯಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಡೆದ ಬಹೃತ್ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹುಲಿವೇಷಧಾರಿಗಳು, ಹುಲಿವೇಷ ತಂಡಗಳ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.ಜೋಡುಕಟ್ಟೆಯಲ್ಲಿ ತಾಸೆ, ಚಂಡೆ ಹಾಗೂ ಬ್ಯಾಂಡ್ ನ ಸದ್ದು ಮೊಳಗಿಸುವ ಮೂಲಕ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಜೋಡುಕಟ್ಟೆಯಿಂದ ಹೊರಟ […]