ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ “39ನೇ ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭ.

ಮಂಗಳೂರು: ವಿದ್ಯಾರ್ಥಿಗಳು ತಮ್ಮ ಗುರಿಗಳಲ್ಲಿ ಬದ್ಧತೆ ಮತ್ತು ಸ್ಪಷ್ಟತೆಯನ್ನು ಹೊಂದಿರಬೇಕು.ಪರಿಶ್ರಮದೊಂದಿಗೆ ಕೆಲಸ ಮಾಡಿದರೆ ಫಲಿತಾಂಶತಾನಾಗಿ ಲಭಿಸುತ್ತದೆ. ಯಾವುದೇ ಕ್ಷೇತ್ರವನ್ನು ನಾವು ಆಯ್ಕೆ ಮಾಡಿದರು ಪರಿಶ್ರಮವಿಲ್ಲದೆ ಯಶಸ್ಸು, ನೆಮ್ಮದಿಯ ಬದುಕನ್ನು ಪಡೆಯಲು ಖಂಡಿತ ಸಾಧ್ಯವಿಲ್ಲ ಎಂದು ಎಕ್ಸ್ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಡಾ.ಸ್ಕಂದ ಮೂರ್ತಿ, ನ್ಯೂರೋಸರ್ಜನ್ ಅವರು ತಿಳಿಸಿದರು. ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ “ಎಕ್ಸ್ಪರ್ಟ್ ಡೆ” ಕಾರ್ಯಕ್ರಮದಉದ್ಘಾಟನಾ ಸಮಾರಂಭ ದಿನಾಂಕ 19 ಡಿಸೆಂಬರ್ 2024ರ ಬೆಳಗ್ಗೆ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರಗಿತು. […]