ಉಡುಪಿ: ನಾಳೆಯಿಂದ 35 ಗ್ರಾಪಂಗಳು ಸೀಲ್ ಡೌನ್; ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಿಲ್ಲ

ಉಡುಪಿ: ನಾಳೆಯಿಂದ (ಜೂನ್ 2) ಐದು ದಿನಗಳ ಕಾಲ ಉಡುಪಿ ಜಿಲ್ಲೆಯ 35 ಗ್ರಾಪಂಗಳು ಸಂಪೂರ್ಣ ಸೀಲ್ ಡೌನ್ ಆಗಲಿದ್ದು, ಮುಂದಿನ ಐದು ದಿನಗಳ ಕಾಲ ಈ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿಗೂ ಕೂಡ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ವಿಡಿಯೋ ಹೇಳಿಕೆಯ ಮೂಲಕ ಮಾಹಿತಿ ನೀಡಿದ ಅವರು, ಕೇವಲ ಹಾಲು, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ. ಐವತ್ತಕ್ಕೂ ಹೆಚ್ಚು ಪಾಸಿಟಿವ್ ಇರುವ ಗ್ರಾಪಂಗಳಲ್ಲಿ ನೋಡಿಕೊಳ್ಳಲು ಅಗತ್ಯ […]