ಉಚ್ಚಿಲ: ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಡೆ; ಆರು ಲಕ್ಷ ರೂ ಗೂ ಅಧಿಕ ನಷ್ಟ

ಪಡುಬಿದ್ರೆ: ಇಲ್ಲಿಗೆ ಸಮೀಪದ ಉಚ್ಚಿಲದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಪ್ರಕ್ಷುಬ್ದ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಡೆಯಾಗಿರುವ ಘಟನೆ ಸೋಮವಾರದಂದು ನಡೆದಿದೆ. ಉಚ್ಚಿಲ ನಿವಾಸಿ ವಿಮಲಾ ಸಿ ಪುತ್ರನ್ ರವರಿಗೆ ಸೇರಿದ ಶ್ರೀ ಗಿರಿಜಾ ಎನ್ನುವ ದೋಣಿಯಲ್ಲಿ ಮೀನುಗಾರರು ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಡಲು ಪ್ರಕ್ಷುಬ್ದಗೊಂಡು ದೋಣಿ ಮಗುಚಿ ಬಿದ್ದಿದೆ. ಇದನ್ನು ಕಂಡ ಅಲ್ಲೇ ಸಮೀಪದಲ್ಲಿದ್ದ ಮೀನುಗಾರರು ದೋಣಿಯಲ್ಲಿದ್ದ ಮೀನುಗಾರರ ನೆರವಿಗೆ ಧಾವಿಸಿ ಏಳು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ದೋಣಿ ಮುಳುಗಡೆಯಾದ್ದರಿಂದ ದೋಣಿಯಲ್ಲಿದ್ದ ಬಲೆ […]
ಉಚ್ಚಿಲ: ಸ್ಕಾರ್ಪಿಯೋ ಚಾಲಕನ ಅವಾಂತರದಿಂದ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಪಡುಬಿದ್ರೆ: ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರದಿಂದಾಗಿ ನಾಲ್ಕು ವಾಹನಗಳು ಸರಣಿ ಅಪಘಾತಕ್ಕೆ ತುತ್ತಾಗಿವೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಎದುರು ಈ ಘಟನೆ ಸಂಭವಿಸಿದೆ. ಸ್ಕಾರ್ಪಿಯೋ ಚಾಲಕ ಅತೀವೇಗ ಹಾಗೂ ನಿರ್ಲಕ್ಷ ತನದಿಂದ ವಾಹನ ಚಲಾಯಿಸುತ್ತಾ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದು, ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನವನ್ನು ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಮುಂದೆ ಸಾಗಿ ಅಲ್ಲಿ ಮತ್ತೆ ಎರ್ಟಿಗಾ ಕಾರು, ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ […]
ಉಚ್ಚಿಲ ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಬಹು ಮಹಡಿ ಸಹಕಾರಿ ಮಹಲ್ ಸ್ಥಾಪನೆ: ದೇವಿಪ್ರಸಾದ್ ಬೆಳಪು

ಉಚ್ಚಿಲ: ಬೆಳಪು ವ್ಯವಸಾಯ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ಗಣನೀಯ ಅಭಿವೃದ್ಥಿ ಸಾಧಿಸಿದ್ದು, ವಾರ್ಷಿಕ ವ್ಯವಹಾರ 200 ಕೋಟಿ ದಾಟಿದ್ದು ಕಳೆದ ವರ್ಷದಿಂದ ಮೂರು ಪಟ್ಟು ವ್ಯವಹಾರವನ್ನು ವೃದ್ಧಿಸಿ ಗ್ರಾಮೀಣ ಪ್ರದೇಶದಲ್ಲಿ ಸಂಘವು ಉನ್ನತ ಸಾಧನೆಯನ್ನು ಮಾಡಿರುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಯಶಸ್ವಿ ಸಂಘ ಇದಾಗಿದ್ದು ಮುಂದಿನ ವರ್ಷ 300 ಕೋಟಿ ರೂ.ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ವರ್ಷ 5.23 ಕೋಟಿ ಸರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ನಿವ್ವಳ ಲಾಭ 49 ಲಕ್ಷವಾಗಿರುತ್ತದೆ. ಸದಸ್ಯರಿಗೆ 12% […]