ಮುದರಂಗಡಿ: ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ದಾರುಣ ಮೃತ್ಯು

ಶಿರ್ವ: ಆಟವಾಡುತ್ತಿದ್ದ ಮಗುವೊಂದು ಬಾವಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮುದರಂಗಡಿಯ ಪೇಟೆಯಲ್ಲಿ ಇಂದು ಸಂಜೆ ನಡೆದಿದೆ. ಮೃತ ಮಗುವನ್ನು ಅದಮಾರು ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿಗಳ ಎರಡೂವರೆ ವರ್ಷದ ಪ್ರಿಯಾಂಕ ಎಂದು ಗುರುತಿಸಲಾಗಿದೆ. ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿ ಮಗುವಿನೊಂದಿಗೆ ಬಟ್ಟೆ ಖರೀದಿಗಾಗಿ ಮುದರಂಗಡಿ ಪೇಟೆಗೆ ಬಂದಿದ್ದರು. ಮಗು ಅಂಗಡಿಯಿಂದ ಹೊರಗೆ ಬಂದು ಆಟವಾಡುತ್ತಿದ್ದು, ಹಾಗೆ ಆಟವಾಡುತ್ತಾ ಅಲ್ಲೇ ರಸ್ತೆ ಬದಿಯಲ್ಲಿದ್ದ ಅಪೂರ್ಣ ಆವರಣ ಗೋಡೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ. ಮಗು ಕಾಣದಿದ್ದಾಗ […]