‘ಟಿಕ್ ಟಾಕ್’ ಸ್ಟಂಟ್: ಕುತ್ತಿಗೆ ಮೂಳೆ ಮುರಿದಿದ್ದ ಯುವಕ ಸಾವು, ಟಿಕ್ ಟಾಕ್ ಗೆ ರಾಜ್ಯದಲ್ಲಿ‌ ಮೊದಲ ‌ಬಲಿ

ತುಮಕೂರು: ಕಳೆದ ಕೆಲ ‌ದಿನಗಳ ಹಿಂದೆ ಟಿಕ್ ಟಾಕ್ ಸ್ಟಂಟ್ ಮಾಡಲು ಪ್ರಯತ್ನಿಸಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಭಾನುವಾರ ಮೃತಪಟ್ಟಿದ್ದಾನೆ. ಆ ಮೂಲಕ‌ ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದ. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡಿತ್ತು.  ಕೂಡಲೇ ಚಿಕಿತ್ಸೆಗಾಗಿ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್  ಮೃತಪಟ್ಟಿದ್ದಾರೆ. ಜೂನ್ 15ರಂದು ಕುಮಾರ್ ಸ್ನೇಹಿತನ ಜೊತೆಯಲ್ಲಿ […]