ಪ್ರೇಕ್ಷಕನ ಎದೆಯೊಳಗೆ ವಿಭಿನ್ನ ಲೋಕ ಸೃಷ್ಟಿಸಿದ “ದಸ್ಕತ್”: ನೋಡಿದ ಮೇಲೂ ಮತ್ತೆ ಮತ್ತೆ ಕಾಡುವ ಒಂದು ಅದ್ಬುತ ಅನುಭವ

ಬರಹ: ಪ್ರಸಾದ ಶೆಣೈ ” ದಸ್ಕತ್” ತನ್ನ ಗ್ರಾಮ್ಯ ಜೀವನದ ಸಮೃದ್ಧ ಫೀಲ್ ಕೊಡುವ, ನಮ್ಮೂರಿನ ಕತೆಯೇ ಇದು ಅನ್ನುವ ಭಾವ ಮೂಡಿಸುವ ಒಂದೊಳ್ಳೆಯ ತುಳು ಸಿನಿಮಾ. ಸತ್ವಯುತವಾದ ಕತೆಯನ್ನು ಅದೆಷ್ಟು ಸಹಜವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕೇಪುಳಪಲ್ಕೆಯ ಹಸಿರು, ಅಲ್ಲಿನ ರಾತ್ರಿ, ಅಲ್ಲಿನ ಭಾಷೆ, ಅಲ್ಲಿನ ಹಾಡು, ಅಲ್ಲಿನ ಮೌನ, ಅಲ್ಲಿನ ಪಂಚಾಯತ್ ಕಚೇರಿ, ಎಲ್ಲಿಗೋ ಕರೆದೊಯ್ಯುವ ಅಲ್ಲಿನ ಪುಟ್ಟ ಪುಟ್ಟ ಮನೆಗಳು, ಅಲ್ಲಿನ ಆಚರಣೆ, ಅಲ್ಲಿನ ಹುಲಿವೇಷ, ಎಲ್ಲವೂ ನೋಡುತ್ತ ನೋಡುತ್ತ ನಮ್ಮದಾಗುತ್ತ ಹೋಗುತ್ತದೆ. ಅದೆಷ್ಟು […]