ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬದಿಂದ ತುಲಾಭಾರ ಸೇವೆ
ಉಡುಪಿ: ಮುಸ್ಲಿಂ ಕುಟುಂಬವೊಂದು ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡುವ ಮೂಲಕ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ಹರಕೆ ಸಲುವಾಗಿ ಇಂದು ತುಲಾಭಾರ ಸೇವೆ ಸಲ್ಲಿಸಿದೆ. ಈ ಭಾಗದ ಶಕ್ತಿ ಕ್ಷೇತ್ರವಾಗಿರುವ ಅಮೃತೇಶ್ವರಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದರಂತೆ ಈ ಕುಟುಂಬವು ತುಲಾಭಾರ ಹರಕೆ ಸೇವೆ ಸಲ್ಲಿಸಿದೆ.