ಟಿಆರ್ ಪಿ ತಿರುಚಿದ ಪ್ರಕರಣ: ರಿಪಬ್ಲಿಕ್ ಟಿವಿ ಸಿಇಒ ಬಂಧನ

ಮುಂಬೈ: ಟಿಆರ್ ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಅವರನ್ನು ಮುಂಬೈ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಕೆಲ ಟಿವಿ ಚಾನೆಲ್ ಗಳ ಟಿಆರ್ ಪಿ ರೇಟಿಂಗ್ ಅನ್ನು ತಿರುಚಲಾಗಿದೆ ಎಂದು ಆರೋಪಿಸಿ ರೇಟಿಂಗ್ ಏಜೆನ್ಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಅಕ್ಟೋಬರ್ ನಲ್ಲಿ ದೂರು ದಾಖಲಿಸಿತ್ತು. ಆರೋಪ ಪಟ್ಟಿಯಲ್ಲಿ ಎರಡು ಮರಾಠಿ ಚಾನೆಲ್ ನೊಂದಿಗೆ ರಿಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನ […]