ತ್ರಿಶಾ ವಿದ್ಯಾ ಕಾಲೇಜು: ಬಿ.ಕಾಂ ಫೋಕಸ್ 360 ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ
ಉಡುಪಿ: ತ್ರಿಶಾ ವಿದ್ಯಾ ಕಾಲೇಜಿನ ಬಿ.ಕಾಂ ಫೋಕಸ್ 360 ಯ ನೂತನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ, ಲೆಕ್ಕ ಪರಿಶೋಧಕ ಗೋಪಾಲ ಕೃಷ್ಣ ಭಟ್, ಬಿ.ಕಾಂ ಫೋಕಸ್ 360 ವಿದ್ಯಾರ್ಥಿಗಳ ಸೃಜನಶೀಲ ಬೇಳವಣಿಗೆಗೆ ಪೂರಕವಾಗಿರುವುದು ಮಾತ್ರವಲ್ಲದೆ ಅವರಲ್ಲಿ ವೃತ್ತಿ ಕೌಶಲಗಳನ್ನು ಹೆಚ್ಚಿಸುತ್ತದೆ ಎಂದರು. ನೂತನ ಬಿ.ಕಾಂ ಫೋಕಸ್ 360 ಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ […]
ತ್ರಿಶಾ ವಿದ್ಯಾ ಕಾಲೇಜು: ಪುಸ್ತಕ ಮನೆ ಉದ್ಘಾಟನೆ
ಉಡುಪಿ: ಆಚರಣೆಗಳಿಗೆ ಉದ್ದೇಶವನ್ನಿಟ್ಟುಕೊಂಡಾಗ ಮಾತ್ರ ಸಾರ್ಥಕ್ಯ ಭಾವ ಮೂಡುತ್ತದೆ. ಪ್ರಸ್ತುತ ಸಮಾಜವನ್ನು ಬದಲಿಸಲು ಓದಿನಿಂದ ಮಾತ್ರ ಸಾಧ್ಯ. ಪುಸ್ತಕ ನಮ್ಮ ದಾರಿಯನ್ನು ನಿರ್ಧರಿಸುತ್ತದೆ. ಓದುವ ಹವ್ಯಾಸ ಹೆಚ್ಚಾದಷ್ಟು ದೇಶ ಭದ್ರವಾಗಿರುತ್ತದೆ ಎಂದು ಸುಧಾ ಆಡುಕಳ ಹೇಳಿದರು. ತ್ರಿಶಾ ಕಾಲೇಜಿನ ಪುಸ್ತಕಮನೆ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲಿಂದ ಪುಸ್ತಕದ ಕಡೆಗೆ ಹೆಚ್ಚು ಆತ್ಮೀಯರನ್ನಾಗಿ ಮಾಡಿದಷ್ಟು ಅವರ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕದ […]