ತ್ರಿಶಾ ಹಾಗೂ ಕ್ರಿಯೇಟಿವ್ ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ; ಮೊಸರು ಕುಡಿಕೆ ಉತ್ಸವ

ಉಡುಪಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ‘ಕ್ರಿಯೇಟಿವ್ ಗುರು ದೇವೋಭವ’ ಕಾರ್ಯಕ್ರಮವನ್ನು ಸೆ.07ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಮೃತ ರೈ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪರ್ಯಂತ ತನ್ನ ಜೀವನೋಪಾಯಕ್ಕೆ ಮಾರ್ಗದರ್ಶನವನ್ನು ನೀಡಿರುವ ಸಮಾಜದಲ್ಲಿ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಾಗುವುದು ನಮ್ಮತನವಾಗಬೇಕೆ ಹೊರತು ಬೀಗುವುದರಿಂದ ನಮಗೇನು ಸಿಗಲಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ […]