ಬುಲ್ ಟ್ರಾಲ್, ಲೈಟ್ ಫಿಶಿಂಗ್ ಮೀನುಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಾಡದೋಣಿ ಮೀನುಗಾರರಿಂದ ಧರಣಿ

ಉಡುಪಿ: ಬುಲ್ ಟ್ರಾಲ್ ಮತ್ತು ಅವೈಜ್ಞಾನಿಕ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ನಿಷೇಧ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ನಾಡದೋಣಿ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕಿನ ತ್ರಾಸಿ ಕಡಲ ಕಿನಾರೆಯಲ್ಲಿ ಧರಣಿ ನಡೆಸಿದರು. ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಾಡದೋಣಿ ಮೀನುಗಾರರು ತ್ರಾಸಿ ಸಮುದ್ರದಲ್ಲಿ ನೂರಾರು ನಾಡದೋಣಿಗಳನ್ನು ಲಂಗರು ಹಾಕಿ ಪ್ರತಿಭಟಿಸಿದರು.ಲೈಟ್ ಫಿಶಿಂಗ್ ಹಾಗೂ ನಿಷೇಧವಾಗಿರುವ ಬಲೆಗಳನ್ನು ಬಳಸಿ ಮಾಡುವ ಬುಲ್ […]