ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ದೇವಸ್ಥಾನಕ್ಕೆ ಡಿಕ್ಕಿ: ಪೈಲಟ್ ಸಾವು

ರೇವಾ: ಶುಕ್ರವಾರ ಮುಂಜಾನೆ ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚೋರ್ಹಾಟಾ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಿಮಾನವು ಪೈಲಟ್ ತರಬೇತಿ ಕಂಪನಿಗೆ ಸೇರಿತ್ತು. मध्य प्रदेश के रीवा में विमान हादसामंदिर से टकराया विमान, ट्रेनी पायलट की मौत दूसरे पायलट […]
ಯುವಕರಿಗೆ ಸೇನಾ ತರಬೇತಿ ನೀಡಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಸೇನೆಗೆ ಸೇರಬಯಸುವ ರಾಜ್ಯದ ಯುವ ಜನತೆಗೆ ಪೂರ್ವಭಾವಿ ತರಬೇತಿಯನ್ನು ನೀಡಲು ಓರ್ವ ಮಾಜಿ ಸೇನಾ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ತರಬೇತಿ ಹೊಂದಿರುವ ಮೂರು ಮಾಜಿ ಸೈನಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ [email protected] ಅನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತ್ರಿಶಾ ಕ್ಲಾಸಸ್: ಮೇ 20 ರಿಂದ ಸಿಎ ಫೌಂಡೇಶನ್ 21 ದಿನಗಳ ಕ್ರ್ಯಾಶ್ ಕೋರ್ಸ್

ಉಡುಪಿ: ಸಿ.ಎ, ಸಿ.ಎಸ್, ಎಂಬಿಎ, ಪದವಿ, ಪಿಯುಸಿ(ಕಾಮರ್ಸ್) ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಮೇ 20 ರಿಂದ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ. ಸಿಎ ಫೌಂಡೇಶನ್ ಸಂಬಂಧಿಸಿದ ವಿಷಯಗಳ ಕುರಿತಾಗಿ ಉಡುಪಿ, ಮಂಗಳೂರು, ಮುಂಬಯಿಯ ಪ್ರಸಿದ್ದ ಪ್ರಾಧ್ಯಾಪಕರ ನೇತೃತ್ವದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಈ ತರಬೇತಿ ಆಯೋಜಿಸಲಾಗಿದೆ. ಪ್ರತಿದಿನ ಸಿಎ ಫೌಂಡೇಶನ್ ಗೆತರಗತಿಗಳು ಜರುಗಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುಲಭ ವಿಧಾನದಿಂದ ಬಗೆ ಹರಿಸುವ ಕುರಿತು […]
ಆಚಾರ್ಯಾಸ್ ಏಸ್ : ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

9-10 ನೇ ತರಗತಿ, ಪಿಯುಸಿ, ಸಿಇಟಿ, ಜೆಇಇ, ನೀಟ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುತ್ತಿರುವ ಉಡುಪಿಯ ಏಸ್ ವತಿಯಿಂದ ಮೇ ಮೊದಲ ವಾರದಿಂದ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಲಾಗಿದೆ. ಮೇ 6ನೇ ತಾರೀಖಿನಿಂದ ಪ್ರತೀ ಶನಿವಾರ ಅಪರಾಹ್ನ 4 ರಿಂದ 6 ರ ವರೆಗೆ ಮತ್ತು ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ತರಬೇತಿ ನೀಡಲಾಗುತ್ತದೆ. ಕಳೆದ 7 ವರ್ಷಗಳಿಂದ ಪರಿಣಾಮಕಾರಿ ತರಬೇತಿ ಮೂಲಕ ಸಾವಿರಕ್ಕೂ ಮಿಕ್ಕಿ […]