ಧರ್ಮಸ್ಥಳದಲ್ಲೂ ನೀರಿನ‌ ಸಮಸ್ಯೆ, ಪ್ರವಾಸ ಮುಂದೂಡುವಂತೆ ಡಾ. ಹೆಗ್ಗಡೆ ಮನವಿ

ಮಂಗಳೂರು: ರಾಜ್ಯದ ಪ್ರಮುಖ ಯಾತ್ರಾಸ್ಥಳ ದ.ಕ. ಜಿಲ್ಲೆಯ ಧರ್ಮಸ್ಥಳದಲ್ಲಿ ನೀರಿನ‌ ಸಮಸ್ಯೆ ಎದುರಾಗಿದ್ದು, ಹೀಗಾಗಿ‌ ಭಕ್ತಾದಿಗಳು ಕೆಲವು ದಿನಗಳ ಮಟ್ಟಿಗೆ ಪ್ರವಾಸ ಮುಂದೂಡುವಂತೆ ಧರ್ಮಾಧಿಕಾರಿ ಡಾ. ಡಿ‌. ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ. ದೇಶದಾದ್ಯಂತ ಬಿಸಿಲಿನ ಝಳ ತೀವ್ರವಾಗಿದ್ದು ನೀರಿನ‌ ಸಮಸ್ಯೆ ತಲೆದೋರಿದೆ. ದ.ಕ. ಜಿಲ್ಲಾಡಳಿತವೂ ರೇಶನಿಂಗ್ ಮೂಲಕ‌ ನೀರು ನೀಡುತ್ತಿದೆ. ಧರ್ಮಸ್ಥಳದಲ್ಲಿ ನೀರಿನ‌ ಸಮಸ್ಯೆ ಎದುರಾಗಿದ್ದು, ನೇತ್ರಾವತಿ ನದಿಯಲ್ಲಿಯೂ ನೀರಿನ‌ ಹರಿವು‌ ಕಡಿಮೆಯಾಗಿದೆ. ಯಾತ್ರಾರ್ಥಿಗಳಿಗೆ ಅಧಿಕ ಪ್ರಮಾಣ ನೀರು ಬೇಕಾಗುತ್ತದೆ. ನೀರಿನ‌ ಸಮಸ್ಯೆಯಿಂದಾಗಿ ಭಕ್ತಾದಿಗಳು ತಮ್ಮ […]