ಇಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ

ಬಂಗಾಳಕೊಲ್ಲಿಯಲ್ಲಿ ಮೋಚ ಚಂಡಮಾರುತವು ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಭಾನುವಾರ ಮೇ 14ರಂದು ಮೋರ್ಚಾ ಚಂಡಮಾರುತ ಬಾಂಗ್ಲಾದೇಶ, ಮಯನ್ಮಾರ್ ಗಡಿ ಭಾಗದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಚಂಡಮಾರುತವು ಪಶ್ಚಿಮ ಬಂಗಾಳ, ಒಡಿಶಾ, ಮಯನ್ಮಾರ್ ನ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಕಾರಣವಾಗಲಿದೆ. ಭಾನುವಾರದವರೆಗೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರತಿ ಗಂಟೆಗೆ 175km ವೇಗದಲ್ಲಿ ಗಾಳಿ ಬೀಸಲಿದ್ದು, ಶುಕ್ರವಾರವೇ ಬಾಂಗ್ಲಾ ಸರ್ಕಾರ ಸುಮಾರು 5 ಲಕ್ಷ ಜನರನ್ನು ಸ್ಥಳಾಂತರ ಗೊಳಿಸುವ […]