ಆ.13 ರಂದು ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಇದರ ಆಶ್ರಯದಲ್ಲಿ ಪ್ರಥಮ ವರ್ಷದ “ಕೆಸರ್ ಡೊಂಜಿ ದಿನ”
ಅಜೆಕಾರು: ಕಾರ್ಕಳ ತಾಲೂಕಿನ ಅಜೆಕಾರು ಶ್ರೀ ವಿಷ್ಣು ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರ ಕೆಸರ್ ಡೊಂಜಿ ದಿನವನ್ನು ಆಗಸ್ಟ್ 13 ಆದಿತ್ಯವಾರ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬಳಿ ಜಯಂತಿಮಾರ್ ಕಂಬಳದಲ್ಲಿ ನಡೆಯಲಿದೆ. ಮರ್ಣೆ ಗ್ರಾಮದ ಹಿಂದೂ ಸಮಾಜದ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಕಬ್ಬಡಿ, ವಾಲಿಬಾಲ್, ಹಗ್ಗ ಜಗ್ಗಾಟ, ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ತಾರ ಮೆರುಗಾಗಿ ತುಳು ಚಿತ್ರನಟರಾದ ದೀಪಕ್ ರೈ ಪಾಣಾಜೆ, […]