ಭಾರತದಲ್ಲಿ ಬ್ಯಾನ್, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಿಕ್ ಟಾಕ್ ಫ್ಯಾನ್! ಐತಿಹಾಸಿಕ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ ಟಿಕ್ ಟಾಕ್

ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಗಡಿ ತಕರಾರು ಉಲ್ಭಣಗೊಂಡ ನಂತರ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಚೀನಾ ವಸ್ತುಗಳ ಮತ್ತು ಚೀನೀ ಅಪ್ಲಿಕೇಷನ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತವು ಬ್ಯಾನ್ ಮಾಡಿರುವ ಚೀನೀ ಅಪ್ಲಿಕೇಷನ್ ಗಳಲ್ಲಿ ಟಿಕ್ ಟಾಕ್ ಕೂಡಾ ಒಂದಾಗಿದೆ. ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದ್ದು, ಇಂತಹ ಅಪ್ಲಿಕೇಷನ್ ಗಳನ್ನು ಭಾರತವು ಬ್ಯಾನ್ ಮಾಡಿದೆ. ಚೀನೀ ಅಪ್ಲಿಕೇಷನ್ ಗಳ ಮೇಲೆ […]
ರೈಲ್ವೇ ಪ್ಲಾಟ್‍ಫಾರಂನಲ್ಲಿ ಟಿಕ್ ಟಾಕ್ ಶೋ: ಇಬ್ಬರ ಬಂಧನ

ಉಡುಪಿ: ಉಡುಪಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲಿ ರೈಲು ಬರುವ ಸಂದರ್ಭದಲ್ಲಿ ಫ್ಲಾಟ್ ಫಾರಂ ಮೇಲೆ ನೃತ್ಯ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಇಬ್ಬರನ್ನು ಎಫ್ರಿಲ್ 14 ರಂದು ರೈಲ್ವೆ ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ತೀರ್ಪು ನೀಡಲಾಯಿತು.