ಸಿಡಿಲಂದ್ರೆ ಭಯಬೀಳ್ತಿರಾ? ಹಾಗಿದ್ರೆ ಈ ಮುನ್ನೆಚ್ಚರಿಕೆ ಪಾಲಿಸಿ, ಸಿಡಿಲಿಂದ ಪಾರಾಗ್ತಿರಾ !
ಇನ್ನೇನು ಮಳೆಗಾಲ ಶುರುವಾಗಲಿದೆ. ಮಳೆಗಾಲದಲ್ಲಿ ಮಳೆಯ ಜೊತೆಜೊತೆಗೆ ಸಿಡಿಲಪ್ಪಳಿಸುವುದು ಮಾಮೂಲು.ಕೆಲವರಿಗಂತೂ ಸಿಡಿಲಂದ್ರೆ ಮೈನಡುಕ ಹುಟ್ಟಿಸುತ್ತದೆ.ವರ್ಷ ವರ್ಷ ಸಿಡಿಲೆರಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ.ಬಹುತೇಕ ಮಂದಿ ಸಿಡಿಲನ್ನು ನಿರ್ಲಕ್ಷಿಸಿ ಸಿಡಿಲು ಬರುವ ಹೊತ್ತಿಗೇನೇ ಮೊಬೈಲ್ ನಲ್ಲಿ ಮಾತಾಡೋದು, ಸುತ್ತಾಡೋದು,ಟಿ.ವಿ ನೋಡೋದು ಮೊದಲಾದ ಕೆಲಸಗಳನ್ನು ಮಾಡುದರಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.ಇಂತಹ ಅಪಾಯಕಾರಿ ಸಿಡಿಲಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಸಿಡಿಲಿಂದ ಪಾರಾಗಬಹುದು. ಹೀಗೆ ಮಾಡಿ: ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ […]