ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಗ್ರಾಮಸ್ಥರಿಂದ ಮನವಿ

ಕಾರ್ಕಳ: ಇಲ್ಲಿನ ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ ಹಾಗೂ ಜಾತ್ರೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುನಿಲ್ ಕೆ.ಆರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ರಾವ್, ಅಶೋಕ್ ಕುಮಾರ್ ಜೈನ್, ಶ್ರೀಧರ ಗೌಡ, ಚೇತನ್ ಪೇರಲ್ಕೆ, ಪ್ರಶಾಂತ್ ಚಿತ್ತಾರ, ಗಂಗಾಧರ ಗೌಡ ಹಾಗೂ ಗ್ರಾಮದ ಪ್ರಮುಖರು ಇದ್ದರು.