ತೆಂಕನಿಡಿಯೂರು: ಗೋಮಾಳ ಜಾಗದ ಮದಗದಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿ ಸ್ಥಗಿತಗೊಳಿಸಲು ಡಿಸಿಗೆ ಮನವಿ
ಉಡುಪಿ: ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟು ಗೋಮಾಳ ಜಾಗದ ಮದಗ (ಕೆರೆ)ದಲ್ಲಿ ಅಕ್ರಮವಾಗಿ ನಡೆಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿ ಎಂ ಕೂರ್ಮ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. ತೆಂಕನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟು ಸರ್ವೆ ನಂಬ್ರ 61 ರಲ್ಲಿ ಗೋಮಾಳ ಜಾಗವಾಗಿದ್ದು ಅದರಲ್ಲಿ ಈಗಾಗಲೆ ಹಿಂದೂ ರುದ್ರಭೂಮಿ ಮತ್ತು ಘನ ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡ ನಿರ್ಮಿಸಿರುತ್ತಾರೆ. ಅ ಘಟಕದ ದ್ರವ ತ್ಯಾಜ್ಯಗಳಿಂದ ಸಮಸ್ಯೆ ಅನುಭವಿಸುತ್ತಿದ್ದರು ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಹಿಸಿಕೊಂಡಿರುತ್ತೇವೆ. ಆದರೆ ಅದರ ಪಕ್ಕದ […]