ಸೆ.28 ರಂದು ‘ದಿ ವ್ಯಾಕ್ಸಿನ್ ವಾರ್’ ಚಿತ್ರ ತೆರೆಗೆ: ಮೊಟ್ಟ ಮೊದಲ ಬಯೋ ಸೈನ್ಸ್ ಚಿತ್ರ ದೇಶದ ಮಹಿಳಾ ವಿಜ್ಞಾನಿಗಳಿಗೆ ಅರ್ಪಣೆ

ದಿ ಕಾಶ್ಮೀರ್ ಫೈಲ್ಸ್‌ನ ಯಶಸ್ಸಿನ ನಂತರ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಸೆ. 28 ರಂದು ದೇಶಾದ್ಯಂತ ತೆರೆ ಕಾಣಲಿದೆ. ವ್ಯಾಕ್ಸಿನ್ ವಾರ್ ಚಿತ್ರವು ಭಾರತೀಯ ಜೈವಿಕ ವಿಜ್ಞಾನಿಗಳ ಬಗ್ಗೆ ನೈಜ ಕಥಾನಕವನ್ನು ಹೊಂದಿದೆ . ಕೋವಿಡ್ -19 ಸಾಂಕ್ರಾಮಿಕದ ಅನಿಶ್ಚಿತತೆಯ ಸಮಯದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ವ್ಯಾಕ್ಸೀನ್ ಅನ್ನು ತಯಾರಿಸಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಚಿತ್ರವು ಸಮರ್ಪಿಸಲ್ಪಟ್ಟಿದೆ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ(NiV) ಹಾಗೂ ICMR […]

ವಿವೇಕ್ ಅಗ್ನಿಹೋತ್ರಿಯ ‘ದ ವ್ಯಾಕ್ಸೀನ್ ವಾರ್’ ನಲ್ಲಿ ಕಾಂತಾರ ಬೆಡಗಿ ಸಪ್ತಮಿಗೌಡ

ಮುಂಬಯಿ: ಕನ್ನಡ ಚಿತ್ರನಟಿ ಕಾಂತಾರ ಬೆಡಗಿ ಸಪ್ತಮಿಗೌಡ ಹಿಂದಿ ಚಿತ್ರಲೋಕದತ್ತ ಪಯಣ ಬೆಳೆಸಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯ ಮುಂಬರುವ ಚಿತ್ರ “ವ್ಯಾಕ್ಸೀನ್ ವಾರ್” ನಲ್ಲಿ ಪ್ರಮುಖ ಪಾತ್ರದಲ್ಲಿ ಸಪ್ತಮಿ ನಟಿಸಲಿದ್ದಾರೆ. ಈ ಬಗ್ಗೆ ನಿರ್ದೇಶಕ ವಿವೇಕ್ ರಂಜನ್ ಟ್ವೀಟ್ ಮಾಡಿದ್ದು, “ಸುಸ್ವಾಗತ ಸಪ್ತಮಿ ಗೌಡ, ದ ವ್ಯಾಕ್ಸೀನ್ ವಾರ್ ನ ನಿಮ್ಮ ಪಾತ್ರವು ಎಲ್ಲರ ಹೃದಯಗಳನ್ನು ಗೆಲ್ಲಲಿದೆ” ಎಂದಿದ್ದಾರೆ. ಚಿತ್ರದ ಬಗ್ಗೆ ಹರ್ಷಾತುರರಾಗಿರುವ ಸಪ್ತಮಿ ಚಿತ್ರದಲ್ಲಿ ನೀಡಿರುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. […]