ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ: ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಗೆ ಭಾರಿ ಮುನ್ನಡೆ
ಅಮೆರಿಕಾ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಸದ್ಯದ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಗೆ 209 ಎಲೆಕ್ಟೋರಲ್ ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೈಡನ್ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆ 118 ಮತಗಳನ್ನು ಪಡೆದಿದ್ದಾರೆ. ಇನ್ನು ಕೊನೆಯ ಎರಡು ಹಂತಗಳ ಮತ ಎಣಿಕೆ ಬಾಕಿ ಇದೆ. ಅಮೆರಿಕಾದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ. ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಅಗತ್ಯವಿದೆ. ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯುತ್ತಾರೆ.