ಪ್ರಧಾನಿ ಮೋದಿಯವರ ಪ್ರಶಂಸೆಗೆ ಪಾತ್ರರಾದ ಬೈಂದೂರಿನ ನವದಂಪತಿ
ಉಡುಪಿ: ಪ್ರಧಾನಿ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂದು ಉಡುಪಿ ಜಿಲ್ಲೆಯ ಬೈಂದೂರಿನ ನವದಂಪತಿಯ ಸ್ವಚ್ಛತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹೌದು, ನವೆಂಬರ್ 18ರಂದು ಕುಂದಾಪುರದ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ಮದುವೆಯಾಗಿದ್ದರು. ಮದುವೆಯಾದ ನವದಂಪತಿ ಹನಿಮೂನ್ ಗೆ ಹೋಗುವುದು ಸಾಮಾನ್ಯ. ಆದರೆ ಈ ದಂಪತಿ ಹನಿಮೂನ್ ಗೆ ಹೋಗುವ ಬದಲು ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ್ದರು. ಇವರು ಲಕ್ಷದ್ವೀಪ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿ ಸ್ವಚ್ಛ ಮಾಡಬೇಕೆಂದು ಅಂದುಕೊಂಡಿದ್ದರು. […]