ರೆಂಜಾಳ ಮಹಾಲಕ್ಷ್ಮಿನಗರದಲ್ಲಿ ತುಳುಲಿಪಿ ನಾಮಫಲಕದ ಉದ್ಘಾಟನೆ

ಕಾರ್ಕಳ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಲಿಪಿ ಅಳಿವಿನಂಚಿನಲ್ಲಿದ್ದು, ಅದನ್ನು ಬೆಳೆಸಿ ಪೋಷಿಸುವುದು ತುಳುವರ ಜವಾಬ್ದಾರಿಯಾಗಿದೆ. ತುಳುವಿಗೆ ತನ್ನದೇ ಆದ ಇತಿಹಾಸವಿದ್ದು ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಮಲ್ಲಿಕಾ ಮುನಿರಾಜ್ ಜೈನ್ ಹೇಳಿದರು. ರೆಂಜಾಳ ಮಹಾಲಕ್ಷ್ಮಿ ನಗರದಲ್ಲಿ ಅಳವಡಿಸಿರುವ ತುಳುಲಿಪಿ ನಾಮ ಫಲಕವನ್ನು ಉದ್ಘಾಟಿಸಿ ಮಾತನಾಡಿದರು. ರೆಂಜಾಳದ ತುಲು ಬಾಂಧವರಿಗೆ ತುಲು ಲಿಪಿ‌ಕಲಿಕೆಗೆ ಅನುಕೂಲವಾಗುಂತೆ ತುಲುಲಿಪಿ ತರಗತಿಯನ್ನು ಆರಂಭಿಸಲಾಗುವುದು. ತುಳುನಾಡಿನಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವದ ಸ್ಥಾನ ನೀಡಲಾಗಿದ್ದು ತುಳು ಬೆಳೆಸುವುದು ನಮ್ಮ ಕರ್ತವ್ಯ ಎಂದರು. […]