ಇವರ ಕೈಲ್ಲರಳಿದ ಮಣ್ಣಿನ ಪಾತ್ರೆಗಳಿಗೆ ಭಾರೀ ಡಿಮ್ಯಾಂಡ್: ಈ ದಂಪತಿಯ ಮಣ್ಣಿನ ಪಾತ್ರೆಗಳನ್ನು ನೀವೂ ತಗೊಳ್ಳಿ
ಅಬ್ಬಾ..ಏನ್ ಬಿಸಿಲಪ್ಪಾ… ಎಷ್ಟು ನೀರ್ ಕುಡಿದ್ರೂ ಸಾಲಲ್ಲ ಅನ್ನೋ ಬೇಸಿಗೆಕಾಲವಿದು. ಹೌದು, ಬೇಸಿಗೆ ಬಂದೊಡನೆ ನೀರಿನ ದಾಹವೂ ಹೆಚ್ಚಾಗುತ್ತೆ. ಸಾವಿರಾರು ರೂಪಾಯಿ ಕೊಟ್ಟು ತೆಗೆದುಕೊಂಡಿರುವ ಪ್ರಿಡ್ಜ್ ಕೂಡ ಮಡಿಕೆಗಳ ಮುಂದೆ ಮಂಕಾಗುತ್ತೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಮಡಿಕೆಯಲ್ಲಿಟ್ಟ ತಂಪು ನೀರು ಕುಡಿದರೆ ಸಮಾಧಾನ ಅನ್ನಿಸುತ್ತೆ. ನಮಗೆ ಸಮಾಧಾನ ಕೊಡುವ ಆ ಮಡಕೆ ಕುಡಿಕೆಗಳ ಮಾಡುತ್ತಾ ಜೀವನ ಸಾಗಿಸುತ್ತಿರುವ ದಂಪತಿಯ ಒಂದು ಕಥೆ ಕೇಳಿ. ಯಜಮಾನನ ಹೆಸರು ಸುಂದರ ಮೂಲ್ಯ. ಅವರ ಪತ್ನಿಯ ಹೆಸರು ಜಲಜ ಮೂಲ್ಯ. […]