ಶ್ರೀನಗರದ ಶಾಲೆ ಮೇಲೆ ಉಗ್ರರ ದಾಳಿ: ಮುಖ್ಯೋಪಾಧ್ಯಾಯಿನಿ, ಶಿಕ್ಷಕ ಮೃತ್ಯು; ಮತ್ತಿಬ್ಬರಿಗೆ ಗಾಯ
ಶ್ರೀನಗರ: ಕಾಶ್ಮೀರ ಕಾಣಿವೆಯಲ್ಲಿ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಇಂದು ಸರ್ಕಾರಿ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಮತ್ತೊಬ್ಬ ಶಿಕ್ಷಕ ಹತ್ಯೆಯಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಉಗ್ರರು ಗುರುವಾರ ಬೆಳಿಗ್ಗೆ ಶಾಲೆಯೊಳಗೆ ಪ್ರವೇಶಿಸಿ ಮುಖ್ಯೋಪಾಧ್ಯಾಯಿನಿ ಮತ್ತು ಮತ್ತೊಬ್ಬ ಶಿಕ್ಷಕನ ಹತ್ಯೆ ನಡೆಸಿದ್ದಾರೆ. ಬಾಲಕರ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸತಿಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಚಾಂದ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ […]