ಜೂ. 8ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ತೆರಯದಿರಲು‌ ನಿರ್ಧಾರ

ಮಂಗಳೂರು: ಸೋಮವಾರದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ತೆರೆಯದಿರಲು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ದೇವಸ್ಥಾನ ತೆರೆದಿಟ್ಟಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ಸಾಧ್ಯತೆ ಇದೆ. ಭಕ್ತಾಧಿಗಳ ದರ್ಶನಕ್ಕೆ ಟಿಕೆಟ್ ಮೂಲಕ ವ್ಯವಸ್ಥೆಗಾಗಿ ಸಾಫ್ಟ್ ವೇರ್ ಮಾಡಲಾಗಿದೆ. ನೂತನ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿದ ಬಳಿಕ ದೇವಸ್ಥಾನ ತೆರೆಯಲು ಚಿಂತನೆ ನಡೆಸಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ದೇವಸ್ಥಾನ ತೆರೆಯಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಜೂ.8ರ ಸೋಮವಾರದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ.