ರಾಜ್ಯದ ದೇವಾಲಯಗಳಲ್ಲಿ ಇ-ಹುಂಡಿ ವ್ಯವಸ್ಥೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಅ 30: ರಾಜ್ಯದ ಎಲ್ಲ ದೇವಾಲಯಗಳ ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಅತ್ಯಂತ ನಿಖರವಾಗಿ ಎಣಿಕೆ ಮಾಡುವ ಇ- ಹುಂಡಿ ವ್ಯವಸ್ಥೆಯನ್ನು ಇ – ಗರ್ವನೆನ್ಸ್ ಇಲಾಖೆ ಮೂಲಕ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಶುಕ್ರವಾರ, ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಪರಿಶೀಲಿಸಿ ಮಾತನಾಡಿದರು. ದೇವಾಲಯದ ಹುಂಡಿಗಳಲ್ಲಿ ಭಕ್ತರು ಹಣ ಹಾಕಿದ ಕೂಡಲೇ, ಹಾಕಿದ ಹಣದ ನಿರ್ದಿಷ್ಟ ಮೊತ್ತವನ್ನು ತೋರಿಸುವ ಹುಂಡಿಗಳನ್ನು ಅಳವಡಿಸಲು […]