ಮಾರುಕಟ್ಟೆಗೆ ಬರಲಿದೆ ಗೇರು ಹಣ್ಣಿನ ವೈನ್‌! ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದ ಎನ್‌ಐಟಿಕೆ ಅಧ್ಯಾಪಕ

ಸುರತ್ಕಲ್: ಸುರತ್ಕಲ್‌ನ ಎನ್‌ಐಟಿಕೆ ಅಧ್ಯಾಪಕರೊಬ್ಬರು ಗೇರು ಹಣ್ಣು ಮತ್ತು ಒಣದ್ರಾಕ್ಷಿಗಳನ್ನು ಬಳಸಿ ವೈನ್ ಉತ್ಪಾದಿಸಲು ಪೇಟೆಂಟ್ ಪಡೆದಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಸನ್ನ ಬೇಲೂರು ದೇವರಭಟ್ಟ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಪೇಟೆಂಟ್‌ಗೆ ‘ಗೋಡಂಬಿ ಸೇಬು ಮತ್ತು ಒಣದ್ರಾಕ್ಷಿಗಳಿಂದ ಆಲ್ಕೊಹಾಲ್ಯುಕ್ತ ಪಾನೀಯವನ್ನು ಉತ್ಪಾದಿಸುವ ಪ್ರಕ್ರಿಯೆ ಮತ್ತು ಅದರಿಂದ ಉತ್ಪತ್ತಿಯಾಗುವ ಆಲ್ಕೊಹಾಲ್ಯುಕ್ತ ಪಾನೀಯ’ ಎಂದು ಶೀರ್ಷಿಕೆ ನೀಡಲಾಗಿದೆ. 2012 ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು ಮತ್ತು ಮೇ 4, 2022 ರಂದು ಪೇಟೆಂಟ್ ದೊರಕಿದೆ. ಡಾ ಬೇಲೂರ್ […]

ವಾಹನಗಳಲ್ಲಿ ಸೀಟ್‌ ಬೆಲ್ಟ್‌ ಎಚ್ಚರಿಕೆ ಸಾಧನ ಕಡ್ಡಾಯ

ನವದೆಹಲಿ: ವಾಹನಗಳಲ್ಲಿ ಸೀಟ್‌ ಬೆಲ್ಟ್‌ ಎಚ್ಚರಿಕೆ ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆ. ಈ ಬ‌ಗ್ಗೆ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸುಳಿವು ನೀಡಿದ್ದಾರೆ. 2019 ಮಾರ್ಚ್‌ ನಂತರ ತಯಾರಾಗುವ ಕಾರುಗಳಲ್ಲಿ ಸೀಟ್ -ಬೆಲ್ಟ್ ಎಚ್ಚರಿಕೆ ಸಾಧನ, ಚಾಲಕರಿಗೆ ಏರ್‌ ಬ್ಯಾಗ್, ವೇಗ ಎಚ್ಚರಿಕೆ ಹಾಗೂ ರಿವರ್ಸ್‌ ಪಾರ್ಕಿಂಗ್ ಎಚ್ಚರಿಕೆ ಸಾಧನ ಕಡ್ಡಾಯವಾಗಲಿದೆ. 2020ರ ವೇಳೆಗೆ ರಸ್ತೆ ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಭಾರತದಲ್ಲಿ ಪ್ರತಿ ವರ್ಷ […]