ಉಡುಪಿ ನಗರಸಭೆ: ಪರಿಷ್ಕೃತ ತೆರಿಗೆ ಪ್ರಕಟ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಹಾಗೂ ಖಾಲಿ ನಿವೇಶನದ ಮಾಲೀಕರುಗಳು 2024-25 ನೇ ಸಾಲಿನ ತೆರಿಗೆಯನ್ನು ಪರಿಷ್ಕೃತ ಮಾರ್ಗಸೂಚಿ ಬೆಲೆಯ ಶೇ. 25 ನ್ನು ಪರಿಗಣಿಸಿ, ತೆರಿಗೆಯನ್ನು ನಿರ್ಧರಿಸಿ, ಸಕಾಲದಲ್ಲಿ ತೆರಿಗೆ ಪಾವತಿಸಿ, ಉಡುಪಿ ನಗರಸಭೆಯ ಅಭಿವೃದ್ಧಿಗೆ ಸಹಕರಿಸುವಂತೆ ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ದೇವಸ್ಥಾನಗಳ ಆದಾಯದ ಶೇ 10ರಷ್ಟು ಸರ್ಕಾರಕ್ಕೆ ಸಲ್ಲಿಕೆ; ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದೂಯೇತರರ ನೇಮಕ: ಬಿಜೆಪಿ ಕೆಂಡಾಮಂಡಲ

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಬುಧವಾರ ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕ(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. 1 ಕೋಟಿಗೂ ಹೆಚ್ಚು ಆದಾಯವಿರುವ ದೇವಸ್ಥಾನಗಳ ಆದಾಯದ ಶೇ 10ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮಸೂದೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಮಸೂದೆಯ ಬಗ್ಗೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ವಿರೋಧ ಪಕ್ಷ ಬಿಜೆಪಿ ಟೀಕಿಸಿದೆ. ರಾಜ್ಯ ಸರ್ಕಾರವು “ಹಿಂದೂ ವಿರೋಧಿ ನೀತಿಗಳಲ್ಲಿ” ತೊಡಗಿಸಿಕೊಂಡಿದೆ ಮತ್ತು ಹಣದ ದುರುಪಯೋಗವಾಗುವುದು ನಿಶ್ಚಿತ ಎಂದು ಆರೋಪಿಸಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ […]
ಗ್ರಾಹಕರಿಗೆ ಶುಭ ಸಮಾಚಾರ! ಸರ್ಕಾರದ ಈ ಕ್ರಮದಿಂದ ಕಡಿಮೆಯಾಗಲಿದೆ ಖಾದ್ಯ ತೈಲ ಬೆಲೆ!

ನವದೆಹಲಿ: ಗ್ರಾಹಕರಿಗೆ ಅಗತ್ಯವಾದ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರವು ವಾರ್ಷಿಕ 20 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ನಿಂದ ವಿನಾಯಿತಿ ನೀಡಿದೆ. ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಆದೇಶವು ಮೇ 25, 2022 ರಂದು ಜಾರಿಗೆ ಬರಲಿದೆ ಮತ್ತು ಮಾರ್ಚ್ 31, 2024 ರ ನಂತರ ಅನ್ವಯವು ನಿಲ್ಲಿಸಲಾಗುತ್ತದೆ. ಈ ಬಗ್ಗೆ ಎಂದು ಸಿಬಿಐಸಿ ಟ್ವೀಟ್ ಮಾಡಿದೆ. Central […]
ಕಡೆಕಾರು ಗ್ರಾ.ಪಂ: 100% ಆಸ್ತಿ ತೆರಿಗೆ ಸಂಗ್ರಹಣೆ

ಉಡುಪಿ: ಉಡುಪಿ ತಾಲೂಕು ಕಡೆಕಾರು ಗ್ರಾಮ ಪಂಚಾಯತಿಯು 2021-22 ನೇ ಸಾಲಿನಲ್ಲಿ 42,05,604 ರೂ. ಆಸ್ತಿ ತೆರಿಗೆ ಸಂಗ್ರಹಣೆ ಮಾಡಿ, ಪ್ರತಿಶತ ನೂರರಷ್ಟು ಸಾಧನೆ ಮಾಡಿದ್ದು, ತೆರಿಗೆ ಸಂಗ್ರಹಕ್ಕೆ ಶ್ರಮಿಸಿದ ಕಡೆಕಾರು ಗ್ರಾಮ ಪಂಚಾಯತ್‌ನ ಬಿಲ್ ಕಲೆಕ್ಟರ್ ಶ್ರೀಧರ್ ಅವರನ್ನು ಇತ್ತೀಚೆಗೆ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸನ್ಮಾನಿಸಿದರು.