ತಪಸ್ಸ್ – 201 ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ
ಕಾರವಾರ(ಉತ್ತರ ಕನ್ನಡ): ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಲ್ಲಿಂದ ಪ್ರಾಯೋಗಿಕ ಹಾರಾಟ ನಡೆಸಿದ ತಪಸ್ಸ್-201, ಕಾರವಾರ ನೌಕಾನೆಲೆಯಿಂದ 148 ಕಿ.ಮೀ ದೂರದಲ್ಲಿದ್ದ ಐಎನ್‌ಎಸ್ ಸುಭದ್ರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ ವಿನ್ಯಾಸಗೊಳಿಸಿದ ತಪಸ್ಸ್-201 ಏರಿಯಲ್ ವೆಹಿಕಲ್, 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ತಪಸ್ಸ್ – 201 ಯಶಸ್ವಿ: ಮಾನವ ರಹಿತ ಏರಿಯಲ್ ವೆಹಿಕಲ್‌ನ ಸಾಮರ್ಥ್ಯ ಪರೀಕ್ಷೆಗಾಗಿ 285 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗದ […]