ಯಂಗ್​, ಲ್ಯಾಥಮ್​, ಫಿಲಿಫ್ಸ್​ ಅರ್ಧಶತಕದಾಟ: ಆಫ್ಘನ್ನರಿಗೆ 289 ರನ್​ಗಳ ಗುರಿ : ವಿಶ್ವಕಪ್​ ಕ್ರಿಕೆಟ್

ಚೆನ್ನೈ (ತಮಿಳುನಾಡು): ಇಂಗ್ಲೆಂಡ್​​ ವಿರುದ್ಧ ಪ್ರಬಲ ಬೌಲಿಂಗ್​ ದಾಳಿಯಿಂದ ಗೆಲುವು ದಾಖಲಿಸಿದ್ದ ಅಫ್ಘಾನ್​ ಚೆನ್ನೈನ ಚೆಪಾಕ್​ ಪಿಚ್​ನಲ್ಲಿ ಕಿವೀಸ್​ಗೆ ಆರಂಭಿಕ ಆಘಾತ ನೀಡಿತು.ಇಂಗ್ಲೆಂಡ್​ ಮಣಿಸಿದ ಅಫ್ಘಾನಿಸ್ತಾನ ಚೆನ್ನೈನ ಚೆಪಾಕ್​ ಸ್ಪಿನ್​ ಟ್ರ್ಯಾಕ್​ನಲ್ಲಿ ನ್ಯೂಜಿಲ್ಯಾಂಡ್​ ಎದುರಿಸಿದ್ದು, ಮೊದಲು ಬ್ಯಾಟ್​ ಮಾಡಿದ ಕಿವೀಸ್​ 288 ರನ್​ ಗಳಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿವೀಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಬೌಲಿಂಗ್​ ಶಕ್ತಿಯಿಂದ ಇಂಗ್ಲೆಂಡ್​ ಮಣಿಸಿದ್ದ ಅಫ್ಘಾನಿಸ್ತಾನದ ಬೌಲರ್​ಗಳ ಅದೇ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡರು. ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದ್ದ […]