ತಮಿಳಿನ ಖ್ಯಾತ ನಟ ಥವಾಸಿ ಇನ್ನಿಲ್ಲ
ಚೆನ್ನೈ: ತಮಿಳಿನ ಖ್ಯಾತ ನಟ ಥವಾಸಿ ಸೋಮವಾರ ಸಂಜೆ ಮಧುರೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ವರುಥಪದಥ ವಾಲಿಬಾರ್ ಸಂಗಂ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಈ ನಟ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನವೆಂಬರ್ 11ರಂದು ಮಧುರೈನ ಶರವಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಟ್ವಿಟ್ಟರ್ ಮೂಲಕ ಈ ವಿಷಯ ತಿಳಿಸಿರುವ ಡಿಎಂಕೆ ಶಾಸಕ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶರವಣನ್ ಈ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.