ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್

ಬೆಂಗಳೂರು: ನಟ ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ತಮಿಳು ನಟ ವಿಶಾಲ್​ ಇಂದು ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್​ 1800 ಮಕ್ಕಳನ್ನು ಓದಿಸುತ್ತಿದ್ದರು. ಹೃದಯಾಘಾತದಿಂದ ಪುನೀತ್ ರಾಜ್​ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ನಟ ವಿಶಾಲ್ ತಿಳಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಹೆಚ್ಚು ಹೆಚ್ಚು […]