ನಾಳೆ ಬೆಂಗಳೂರಿಗೆ ಕಠಿಣ ನಿಯಮ ಜಾರಿ: ಸಚಿವ ಆರ್. ಅಶೋಕ್

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಮಿತಿ ಮೀರಿದ್ದು, ಈ ಹಿನ್ನಲೆಯಲ್ಲಿ ನಾಳೆ (ಏ.18) ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಹಿತಿ ನೀಡಿದ ಅವರು, ಕಳೆದ ವರ್ಷದ ಲಾಕ್ ಡೌನ್ ನಿಂದಲೇ ತುಂಬಾ ಸಮಸ್ಯೆ ಆಗಿದೆ. ಹಾಗಾಗಿ ಲಾಕ್ ಡೌನ್ ಹೊರತು ಪಡಿಸಿ ಬಿಗಿ ಕ್ರಮ ಜಾರಿ ಮಾಡಲಾಗುತ್ತದೆ. ಬೆಂಗಳೂರಿಗೆ ಲಾಕ್ ಡೌನ್ ಅವಶ್ಯಕತೆ ಇಲ್ಲ, ಸರ್ಕಾರದ ‌ಮುಂದೆಯೂ ಲಾಕ್ ಡೌನ್ ಪ್ರಸ್ತಾವ ಇಲ್ಲ ಎಂದರು. […]