ಟಿ20 ವಿಶ್ವಕಪ್: ಇಂದು ಇಂಡೋ-ಪಾಕ್ ಕದನ; ವಿರಾಟ್ ಕೊಹ್ಲಿ ಬಳಗಕ್ಕೆ ಅಜೇಯ ಇತಿಹಾಸದ ಪರಂಪರೆ ಉಳಿಸಿಕೊಳ್ಳುವ ಸವಾಲು..!
ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಜಗತ್ತಿನ ಈ ಬದ್ಧ ಎದುರಾಗಳಿಗಳ ಹಣಾಹಣಿಯನ್ನು ಕಣ್ಮನ ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲು ವಿರಾಟ್ ಕೊಹ್ಲಿ ಬಳಗದಾಗಿದ್ದರೆ, ಭಾರತದ ಅಜೇಯ ಓಟಕ್ಕೆ ತಡೆಯೊಡ್ಡಿ ಹೊಸ ಇತಿಹಾಸ ನಿರ್ಮಿಸುವ ಕನಸು ಬಾಬರ್ ಆಜಂ ಬಳಗದ್ದು. ಉಭಯ ದೇಶಗಳ ನಡುವಣ ಹದಗೆಟ್ಟಿರುವ ರಾಜಕೀಯ ಸಂಬಂಧಗಳಿಂದಾಗಿ ಕ್ರೀಡಾ ತಂಡಗಳು ಮುಖಾಮುಖಿಯಾಗುವುದು ಅಪರೂಪವಾಗಿದೆ. ಎರಡೂ ತಂಡಗಳ […]