ಹಲ್ಲಿನ ಆರೈಕೆಯಲ್ಲಿ ಕೇರ್ ಲೆಸ್ ಮಾಡ್ಬೇಡಿ:ಇಲ್ಲಿದೆ ಹಲ್ಲಿನ ಆರೋಗ್ಯ ಕಾಪಾಡಲು ಬೊಂಬಾಟ್ ಟಿಪ್ಸ್
ಆರೋಗ್ಯಕರವಾದ, ಸುಂದರ, ಸ್ವಚ್ಛ ಹಲ್ಲುಗಳನ್ನು ಪಡೆಯುವುದು ಎಲ್ಲರ ಇಚ್ಛೆ. ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವುದು ರೂಢಿ. ಆದರೆ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ತುಂಬಾ ಮುಖ್ಯ. ರಾತ್ರಿ ಹೊತ್ತಲ್ಲಿ ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಲುಕಿಕೊಂಡಾಗ ಬ್ಯಾಕ್ಟೀರಿಯಾಗಳು ಆಹಾರದ ಭಾಗಗಳನ್ನು ಸೇವಿಸಲು ಆರಂಭಿಸುತ್ತದೆ. ಇದರಿಂದ ಹಲ್ಲುಗಳು ಕೊಳೆಯಲು ಪ್ರಾರಂಭವಾಗುತ್ತದೆ, ಮಾತ್ರವಲ್ಲದೆ ಬಾಯಿಯ ದುರ್ವಾಸನೆ ಹೆಚ್ಚುತ್ತದೆ. ಇನ್ನು ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ […]