ಬಾಲ್ಯದ ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ಸವಿ ಸವಿ ನೆನಪುಗಳು: ಪ್ರಗತಿ ಬರೆದ ವಿಶೇಷ ಬರಹ..
75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಗೆ ಇಡೀ ದೇಶವೇ ಸಜ್ಜಾಗುತ್ತಿದೆ. ಈ ಸಂಭ್ರಮವನ್ನ ಕಣ್ತುಂಬಿ ಕೊಳ್ಳುತ್ತಿರುವ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರು ಮುಗಿಯುತ್ತಿರಲಿಲ್ಲ. ಅಗಸ್ಟ್ 15 ಎಂದಾಗ ಹುಡುಗಿಯರಿಗೆ ಥಟ್ ಎಂದು ಮನದಲ್ಲಿ ಹಾದು ಹೋಗುವ ಒಂದು ವಿಷಯವೆಂದರೆ ಕೇಸರಿ,ಬಿಳಿ ಮತ್ತು […]