ತೆಂಗಿನ ಸೋಗೆ ಹೆಣೆದು ಗಮನಸೆಳೆದ ಪೇಜಾವರ ಶ್ರೀ
ಉಡುಪಿ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ಅನೇಕ ಬಾರಿ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಆ ಸರದಿಗೆ ತೆಂಗಿನ ಸೋಗೆ ಹೆಣೆಯುವ ಪ್ರತಿಭೆಯೂ ಸೇರ್ಪಡೆಯಾಗಿದೆ. ಹೌದು, ಕೃಷಿ ಕುಟುಂಬದಿಂದ ಬಂದ ಶ್ರೀಗಳು ಸನ್ಯಾಸ ಸ್ವೀಕಾರದವರೆಗೂ ಆ ತುಂಬು ಸಂಪ್ರದಾಯಸ್ಥ ಮನೆಯ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಆ ಬಳಿಕವೂ ಸಂದರ್ಭ ಸಿಕ್ಕಾಗೆಲ್ಲ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಯಾವುದೇ ಬಿಗುಮಾನಗಳಿಲ್ಲದೆ ತೊಡಗಿಸಿಕೊಂಡದ್ದನ್ನು ಕಾಣುತ್ತಿರುತ್ತೇವೆ. ಮಂಗಳವಾರದಂದು ಉಡುಪಿಯ ಮಠದಲ್ಲಿ ಯಾವುದೋ ಕೆಲಸಕ್ಕೆ ಅಗತ್ಯವಿದ್ದ ತೆಂಗಿನ ಸೋಗೆಯನ್ನೂ ತಾವೇ ಸ್ವತಃ ತುಂಬ […]