ತ್ಯಾಜ್ಯದಿಂದ ಐಶ್ವರ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಜಾಥಾ
ಉಡುಪಿ: ನಗರಸಭೆ ಉಡುಪಿ ಹಾಗೂ ಸರ್ವೋದಯ ಇಂಟಿಗ್ರೇಟೆಡ್ ಟ್ರೈನಿಂಗ್ ಅಂಡ್ ರೂರಲ್ ಅಸೋಸಿಯೇಷನ್ ದಾವಣಗೆರೆ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 5 ರಂದು ಬೆಳಗ್ಗೆ 7.30 ಕ್ಕೆ ತ್ಯಾಜ್ಯದಿಂದ ಐಶ್ವರ್ಯ ಎಂಬ ಘೋಷವಾಕ್ಯದೊಂದಿಗೆ ಉಡುಪಿ ನಗರಸಭೆ ಕಾರ್ಯಾಲಯದಿಂದ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಭುಜಂಗ ಪಾರ್ಕ್ ವರೆಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.