ನನ್ನೆದೆಯ ಕಾದಂಬರಿಯಲಿ ರಾಜ ನೀನು:ಸುಷ್ಮಾ ಬರೆದ ತಣ್ಣನೆಯ ಬರಹ

ಹಾಗೇ ಸುಮ್ಮನೆ ಏನೋ ಗಾಢವಾದ ಯೋಚನೆಯಲ್ಲಿದ್ದ ಮನಸ್ಸಿಗೆ ಎಲ್ಲಿಂದಲೋ ಒಂದು ಸಿಹಿಗಾಳಿ ಸೋಕಿದಂತಾಯಿತು. ಅದೇಕೋ ತಿಳಿಯದು ತುಸು ಮೆಲ್ಲಗೆ ಮನಸು ಹಿಡಿತ ತಪ್ಪಿತು. ಎಲ್ಲಿಂದಲೋ ಮಧುರವಾಗಿ ಹರಿದು ಬಂದ ಇಂಪಾದ ದನಿಯೊಂದು ನನ್ನೆರಡು ಕರ್ಣಗಳಿಗಪ್ಪಳಿಸಿದವು. ಜಾಗ ಬಿಟ್ಟು ಕದಡಲೇ? ಅಥವಾ ಆ ಮಧುರ ಗೀತೆಯ ಅಲ್ಲೇ ಕುಳಿತು ಆಲಿಸಲೇ? ಮನಸ್ಸಲ್ಲಿ ಕಸಿ-ವಿಸಿ, ಗೊಂದಲ.ಈ ವಯಸ್ಸಿನಲ್ಲಿ ಹಾಗೇ ಅಲ್ವಾ, ಮನಸೊಂದು ಚಂಚಲ. ಆ ಧ್ವನಿಯ ಕಾಣಲೇಬೇಕೆಂದು ಕಣ್ಣುಗಳು, ಅದರೆಡೆಗೆ ನಡೆಯಬೇಕು ಎಂದು ಕಾಲುಗಳು, ಮತ್ತೆ ಕೂರಲು ಸಾಧ್ಯವಿಲ್ಲ. ಮನಸು […]