ಹೆಜಮಾಡಿ: ಹೋಟೆಲ್ ಉದ್ಯಮಿ ನೇಣಿಗೆ ಶರಣು
ಪಡುಬಿದ್ರಿ: ನಿರುದ್ಯೋಗದಿಂದ ಮಾನಸಿಕ ಖಿನ್ನತೆಗೆ ಒಳಗಾದ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪುವಿನ ಹೆಜಮಾಡಿಯಲ್ಲಿ ಇಂದು ನಡೆದಿದೆ. ಹೆಜಮಾಡಿ ನಿವಾಸಿ 54 ವರ್ಷದ ಯಶವಂತ ಶೆಟ್ಟಿ ಆತ್ಮಹತ್ಯೆಗೆ ಶರಣಾದ ಉದ್ಯಮಿ. ಇವರು ಈ ಹಿಂದೆ ಮುಂಬೈಯಲ್ಲಿ ಹೋಟೆಲ್ ಮಾಡಿಕೊಂಡಿದ್ದು, ಕಳೆದ 3 ವರ್ಷದ ಹಿಂದೆ ಲಾಕ್‌ಡೌನ್ ಕಾರಣ ತಮ್ಮ ಊರಾದ ಕಾಪುವಿನ ಹೆಜಮಾಡಿಯಲ್ಲಿರುವ ಅವರ ಮನೆಗೆ ಬಂದಿದ್ದರು. ಬಳಿಕ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು […]