ಹಿರಿಯಡಕ: ಪರೀಕ್ಷೆಯ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣಿಗೆ ಶರಣು
ಹಿರಿಯಡ್ಕ: ಪರೀಕ್ಷೆಯ ಭಯದಿಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಕಾಜರಗುತ್ತು ರಸ್ತೆ ಎಂಬಲ್ಲಿ ನಡೆದಿದೆ. ಬೊಮ್ಮರಬೆಟ್ಟು ಗ್ರಾಮದ ಕಾಜರಗುತ್ತು ರಸ್ತೆಯ ಕುಕ್ಕುದಕಟ್ಟೆ ನಿವಾಸಿ ಜಿಸಾನ್ ಆತ್ಮಹತ್ಯೆಗೆ ಮಾಡಿಕೊಂಡ ಬಾಲಕ. ಈತ ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ, ಕಳೆದ ಒಂದು ವಾರದಿಂದ ಶಾಲೆಗೆ ಸರಿಯಾಗಿ ಹೋಗದೆ ಮನೆಯಲ್ಲಿಯೇ ಇದ್ದನು. ಅಲ್ಲದೆ, ಫೆ.21ರಂದು ಪರೀಕ್ಷೆ ಇದ್ದು, ಅದಕ್ಕೂ ಹೋಗದೆ ಮನೆಯಲ್ಲಿಯೇ ಇದ್ದನು. ಇದಕ್ಕೆ […]