ಸೀಮಿತ ಕಲಾತಂಡಗಳೊದಿಗೆ ಸರಳವಾಗಿ ಪರ್ಯಾಯೋತ್ಸವ ಮೆರವಣಿಗೆ ನಡೆಸಲು ತೀರ್ಮಾನ: ನಗರದಲ್ಲಿ ಸಚಿವ ಸುನಿಲ್ ಕುಮಾರ್
ಕೋವಿಡ್ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಭಾವೀ ಪರ್ಯಾಯ ಶ್ರೀಗಳ ಅಪೇಕ್ಷೆಯಂತೆ ಸೀಮಿತ ಕಲಾತಂಡಗಳೊದಿಗೆ ಪರ್ಯಾಯೋತ್ಸವ ಮೆರವಣಿಗೆ, ಧಾರ್ಮಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ನಗರ ಜಿಪಂ ಸಭಾಂಗಣದಲ್ಲಿ ನಡೆದ ಪರ್ಯಾಯೋತ್ಸವ ಸಮಿತಿ ಹಾಗೂ ಅಧಿಕಾರಿಗಳ ಸಭೆಯ ಬಳಿಕ, ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸಾರ್ವಜನಿಕರ ಪ್ರವೇಶಕ್ಕೆ ನಿಬಂಧನೆ ಹಾಕಲಾಗಿದ್ದು, ಹೆಚ್ಚು ಜನ ಸೇರಿದಂತೆ ಈಗಾಗಲೇ ಮನವಿ ಮಾಡಲಾಗಿದೆ. […]